ಇನ್ನೇನ ಬಿಡಲಿ...?



ಹುಟ್ಟೂರ ಬಿಟ್ಟೆ,
ಹುಟ್ಟು ಗುಣವ ಬಿಟ್ಟೆ,
ತಿಳಿದ ಬಯಕೆ ಬಿಟ್ಟೆ,
ತೀರದ ಆಸೆ ಬಿಟ್ಟೆ,
ಕನಸ ಕಾಣುವುದ ಬಿಟ್ಟೆ,
ಕನಸಲಿ ಬರುವುದ ಬಿಟ್ಟೆ,
ನಗುವುದ ಬಿಟ್ಟೆ,
ನಗಿಸುವುದ ಬಿಟ್ಟೆ,
ನಿನ್ನೊಲಿಸಲು ಇನ್ನೇನ ಬಿಡಲಿ?
ಇರುವುದೊಂದು ಜೀವ.....
ಬಿಡೆನು ನಿನ್ನ ನೆನಪ...............

12 comments:

  shivu.k

October 26, 2009 at 5:41 PM

ಬಿಡುವ ವಿಚಾರದಲ್ಲಿ ಇಷ್ಟೆಲ್ಲಾ ಇದೆಯಾ....

ತುಂಬಾ ಚೆನ್ನಾಗಿ ಬರೆದಿದ್ದೀರಿ...

  Ittigecement

October 27, 2009 at 7:34 AM

ನೆನಪುಗಳೇ...
ಹೃದಯಲ್ಲಿದ್ದು...
ಹಸಿರಾಗಿಸುತ್ತವೆ..
ಮತ್ತೆ ಮತ್ತೆ...
ಬರಡಲ್ಲೂ..
ಚಿಗುರತ್ತವೆ...
ನಿನ್ನ ಪ್ರೀತಿಗೆ..
ಬಣ್ಣಗಳಾಗುತ್ತವೆ...
ಹೊಸ ಕನಸುಗಳಾಗುತ್ತವೆ...

ಬಹಳ ಸುಂದರವಾಗಿದೆ ನಿಮ್ಮ ಕವನ...
ಬಹಳ ಇಷ್ಟವಾಯಿತು... ಅಭಿನಂದನೆಗಳು...

  Anonymous

October 28, 2009 at 2:55 PM

ಗುರು,, ತುಂಬಾ ಚೆನ್ನಾಗಿದೆ ನಿಮ್ಮ ಕವನ.. ಕಣ್ಣಲ್ಲಿ ನೀರು ತರಿಸುವಲ್ಲಿ ಯಶಸ್ವಿಯಾಯಿತು..ನಮ್ಮ ಪ್ರೀತಿಯ ವ್ಯಕ್ತಿಗೋಸ್ಕರ ಏನೇನೆಲ್ಲಾ ಮಾಡುತ್ತೇವೆ, ಅಲ್ವಾ?
ಪ್ರತಿಯೊಂದು ವಾಕ್ಯವೂ ಮನಸ್ಸನ್ನು ತಟ್ಟುವಲ್ಲಿ ಸಫಲವಾಯಿತು..

  ದಿನಕರ ಮೊಗೇರ

October 30, 2009 at 9:23 PM

ತುಂಬಾ ಚೆನ್ನಾಗಿತ್ತು...
ನೋವಿನ ಆಳ, ಅಗಲ ಎಲ್ಲವನ್ನೂ ತಿಳಿಸಿದ ಕವನ......

  ಶಿವಪ್ರಕಾಶ್

November 5, 2009 at 2:07 PM

super....

  ಮೌನಿ

November 7, 2009 at 5:33 PM

ಏನೋ...ಇನ್ನೂ ಇರಬಹುದು ಶಿವು ಸಾರ್...
ಆ ಕ್ಶಣಕ್ಕೆ ನಾನು ಬಿಟ್ಟಿದ್ದು(ಅನಿಸಿದ್ದು) ಇಷ್ಟು....
ತುಂಬಾ ಧನ್ಯವಾದಗಳು ಸಾರ್.

  ಮೌನಿ

November 7, 2009 at 5:35 PM

ಪ್ರಕಾಶಣ್ಣ...ನಿಮ್ಮ ಹಾರೈಕೆಗೆ ಧನ್ಯವಾದಗಳು.....
ನಿಮ್ಮ ಬರಹಗಳು ತುಂಬಾ ಇಷ್ಟ ನನಗೆ...
ನಿಮ್ಮ ಸ್ನೇಹ ಹಸ್ತ ಹೀಗೇ ಇರಲಿ...

ಗುರು

  ಮೌನಿ

November 7, 2009 at 5:41 PM

ಹೌದು ಚೇತನಾ ಅವರೆ...
ಪ್ರೀತಿ ಪಾತ್ರರಿಗೇ ಅಲ್ಲವೆ ನಮ್ಮ ಹ್ರದಯದಲ್ಲಿ ಜಾಗ.
ನೆನಪುಗಳು ಇರುವುದೇ ಕಾಡುವುದಕ್ಕಲ್ಲವೇ?
ತುಂಬಾ ಧನ್ಯವಾದಗಳು ಬಂದು ಓದಿ ಅತ್ತಿದ್ದಕ್ಕೆ.

ಗುರು

  ಮೌನಿ

November 7, 2009 at 5:43 PM

ತುಂಬಾ ಧನ್ಯವಾದಗಳು ದಿನಕರ ಸಾರ್....
ನಿಮ್ಮ ಹಾರೈಕೆಯ ಅವಶ್ಯಕತೆ ತುಂಬಾ ಇದೆ....ಹೀಗೇ ಬರುತ್ತಿರಿ.

ಗುರು.

  ಮೌನಿ

November 7, 2009 at 5:44 PM

ಥ್ಯಾಂಕ್ಸ್ ಶಿವಪ್ರಕಾಶ್ ಸರ್......
ಮೆಚ್ಹುಗೆಯ ಮಾತಿಗೆ ಧನ್ಯ.

ಗುರು.

  Dileep Hegde

November 17, 2009 at 3:45 AM

ಕವನ ಅದ್ಭುತವಾಗಿದೆ..
ಹೌದು.. ನಾವು ಪ್ರೀತಿಪಾತ್ರರ ಮನವೊಲಿಕೆಗೆ ಯಾವ ತ್ಯಾಗ ಬೇಕಾದ್ರೂ ಮಾಡಬಹುದು...
ಆದರೆ ನೆನಪಿನಿಂದಲೇ ಅಳಿಸಿಹಾಕುವದು ಮಾತ್ರ ಸಾಧ್ಯವಿಲ್ಲದ ಮಾತು...
ಇನ್ನಷ್ಟು ಇಂತಹ ಕವನಗಳು ಬರಲಿ... ಅಭಿನಂದನೆಗಳು..

  ಮೌನಿ

November 18, 2009 at 11:12 PM

ಧನ್ಯವಾದಗಳು ದಿಲೀಪ.
ಕಾಡತಾವ ನೆನಪುಗಳು......ಬಂದು ಮೆಚ್ಹಿದ್ದಕ್ಕೆ ಧನ್ಯವಾದಗಳು.

ಗುರು.