ಬಾರದವಳು.......


ತಂಗಾಳಿಯೊಳಗಿನ ಕಂಪು
ಮನದಲೆಲ್ಲೋ ಪಿಸು ಮಾತು
ಜೇನು ಕಂಗಳ ಚೆಲುವೆ
ಮೂರು ಸಂಜೆಯ ಹೊತ್ತು
ಮನವ ಕಲಕುವೆ ಏಕೆ?


ಉಯ್ಯಾಲೆ ತೂಗಿತು ಮನಸು
ಮಗ್ಗುಲಾದವು ನೆನಪು
ತೆಕ್ಕೆ ಬಿದ್ದವು ಕನಸು
ಮಧುವು ನಿನ್ನಧರದಲ್ಲೇಕೆ?
ಸವಿವ ಹಂಬಲ ಎನಗೆ


ಮತ್ತು ತುಂಬಿದ ಕಂಗಳು
ಅದುರು ತುಟಿಗಳು
ಮುಂಗುರುಳ ಲಾಸ್ಯ
ತೆರೆ-ಮರೆಯ ಮನಸು
ಮತ್ತೇನೋ ಬಯಸಿದೆ ತನುವುಜರಡಿಯಾಗಿದೆ ದೇಹ
ಕಣ್ಣ ಹನಿಗಳು ಕೊರೆದು
ಹೃದಯದಲ್ಲೆಲ್ಲೋ ಕಿರು ಹಣತೆ
ಹೆಜ್ಜೆ-ಗೆಜ್ಜೆಗಳ ಬರವು

ಹುಸಿ ನಿರೀಕ್ಷೆ,ಅದೇ ಕಿರು ನಗುವು

14 comments:

  shivu.k

March 16, 2010 at 3:51 PM

ಸರ್.

ಜರಡಿಯಾಗಿದೆ ದೇಹ
ಕಣ್ಣ ಹನಿಗಳು ಕೊರೆದು.....

ತುಂಬಾ ಚೆನ್ನಾಗಿ ಬರೆದಿದ್ದೀರಿ...

  ಗೌತಮ್ ಹೆಗಡೆ

March 16, 2010 at 7:08 PM

nice sir:)

  ದಿನಕರ ಮೊಗೇರ..

March 16, 2010 at 9:27 PM

ಪ್ರೇಮ ಪ್ರತಿ ಸಾಲಲ್ಲೂ ತುಂಬಿ ತುಳುಕುತ್ತಿದೆ ....... ಸುಂದರ ಪ್ರೇಮ ಕಾವ್ಯ...ಪ್ರತಿ ಸಾಲು ಇನ್ನೇನನ್ನೋ ಕೇಳುತ್ತಿದ್ದ ಹಾಗಿತ್ತು.... ಧನ್ಯವಾದ.......

  ಮೌನಿ

March 17, 2010 at 11:00 PM

ಶಿವು ಸರ್....
ಧನ್ಯವಾದಗಳು.... ನಿಮ್ಮೆಲ್ಲರ ಪ್ರೋತ್ಸಾಹ ತುಂಬಾ ಖುಶಿ ಕೊಡುತ್ತದೆ...

  ಮೌನಿ

March 17, 2010 at 11:02 PM

ತುಂಬಾ ಧನ್ಯವಾದಗಳು ಗೌತಮ್ ಸರ್...
ನಲ್ಮೆಯ ಆಶೀರ್ವಾದ ಸದಾ ಇರಲಿ....

  ಮೌನಿ

March 17, 2010 at 11:06 PM

ದಿನಕರ್ ಸರ್....,
ನೀವು ಬರುವುದೇ ಒಂದು ಖುಶಿಯ ವಿಷಯ.ಅದರಲ್ಲೂ ಹೊಗಳಿದರೆ ನಾನು ಅಟ್ಟಕ್ಕೇ ಏರುತ್ತೇನೆ....
ತುಂಬಾ ತುಂಬಾ ಧನ್ಯವಾದಗಳು.

  ಸಾಗರದಾಚೆಯ ಇಂಚರ

March 18, 2010 at 10:36 PM

ಮತ್ತು ತುಂಬಿದ ಕಂಗಳು
ಅದುರು ತುಟಿಗಳು
ಮುಂಗುರುಳ ಲಾಸ್ಯ
ತೆರೆ-ಮರೆಯ ಮನಸು
ಮತ್ತೇನೋ ಬಯಸಿದೆ ತನುವು

enthaa saalugalau
sundara kavana

  ಮೌನಿ

March 18, 2010 at 11:01 PM

ಗುರು ಅಣ್ಣ....
ತುಂಬಾ ಥ್ಯಾಂಕ್ಸ್....ನೀವೆಲ್ಲರು ಮೆಚ್ಚಿದರೆ ಅದಕಿಂತ ಬೇರೇನೂ ಬೇಡ.....
ಧನ್ಯವಾದಗಳು....

  ಮನಮುಕ್ತಾ

March 29, 2010 at 10:47 AM

nice one!

  Snow White

April 3, 2010 at 5:57 PM

nice one sir..tumba lateaagi bandiruve..sorry sir :)

  ಮೌನಿ

April 5, 2010 at 11:47 PM

ಮನಮುಕ್ತಾ ಅವರೆ
ತುಂಬಾ ಧನ್ಯವಾದಗಳು ಹಾಗೂ ಬ್ಲಾಗಿಗೆ ಸ್ವಾಗತ....

  ಮೌನಿ

April 5, 2010 at 11:52 PM

ಸ್ನೋ ವ್ಹೈಟ್ ಅವರೆ
ನೀವೆಲ್ಲರೂ ಬಂದು ಮೆಚ್ಚುಗೆಯ ನುಡಿ ಬರೆಯುವುದೇ ಖುಶಿಯ ಸಂಗತಿ...ಅದೇ ನನಗೆ ಅಮೂಲ್ಯ....ಇನ್ನು ಸಾರಿ ಕೇಳಿ ಬೇಜಾರು ಮಾಡಬೇಡಿ....ನಿಮ್ಮ ಬರವಿನ ಆಸೆ ಸದಾ ಇರುತ್ತದೆ....
ಧನ್ಯವಾದಗಳು.

  ಜಲನಯನ

June 7, 2010 at 1:20 AM

ಮೌನಿ ಆಡಿದ ಮಾತು
ತುಟಿಬಿಚ್ಚದೆ ಜಾಹಿರಾತು.....ಹಹಹ ಚನ್ನಾಗಿದೆ ..
ರಸಿಕತೆಯ ಮಧ್ಯೆ ಯಾಕೋ ದೇಹ ಜರಡಿ ..ಕಣ್ಣ ಹನಿ...ಅರ್ಥ ಆಗ್ಲಿಲ್ಲ....ಅಥವಾ...ವಾಹ್..ವಾಹ್..ಎನ್ನಲೇ...
ಆದ್ರೆ ನಿಮ್ಮ ಎರಡನೇ ಚರಣ...ಸಿಂಪ್ಲಿ ಸೂಪರ್...

  ಮೌನಿ

June 8, 2010 at 6:50 PM

ಜಲನಯನ ಸರ್,
"ಬರುವ ನಿರೀಕ್ಷೆ ಹುಸಿಯಾದಾಗ ವಿರಹ ಹುಟ್ಟುವದು ಸಹಜ ಹಾಗು ಸಜ ಕೂಡಾ.ಅದೇ ವಿರಹ ಕಣ್ಣೀರಾಗಿ ಹರಿದರೆ ಹೃದಯ ಜರಡಿಯಾಗದೆ ಇನ್ನೇನು...?"
ನನ್ನ ಕಲ್ಪನೆ.
ನಿಮ್ಮ ಅನುನಯದ ಮಾತುಗಳು,ಹಾಗು ಪ್ರೋತ್ಸಾಹಕ್ಕೆ ಧನ್ಯ.
ತುಂಬಾ ಧನ್ಯವಾದಗಳು.