ಇನ್ನೇನ ಬಿಡಲಿ...?ಹುಟ್ಟೂರ ಬಿಟ್ಟೆ,
ಹುಟ್ಟು ಗುಣವ ಬಿಟ್ಟೆ,
ತಿಳಿದ ಬಯಕೆ ಬಿಟ್ಟೆ,
ತೀರದ ಆಸೆ ಬಿಟ್ಟೆ,
ಕನಸ ಕಾಣುವುದ ಬಿಟ್ಟೆ,
ಕನಸಲಿ ಬರುವುದ ಬಿಟ್ಟೆ,
ನಗುವುದ ಬಿಟ್ಟೆ,
ನಗಿಸುವುದ ಬಿಟ್ಟೆ,
ನಿನ್ನೊಲಿಸಲು ಇನ್ನೇನ ಬಿಡಲಿ?
ಇರುವುದೊಂದು ಜೀವ.....
ಬಿಡೆನು ನಿನ್ನ ನೆನಪ...............