Posted by
ಮೌನಿ
Tuesday, March 16, 2010
at
1:50 AM

ತಂಗಾಳಿಯೊಳಗಿನ ಕಂಪು
ಮನದಲೆಲ್ಲೋ ಪಿಸು ಮಾತು
ಜೇನು ಕಂಗಳ ಚೆಲುವೆ
ಮೂರು ಸಂಜೆಯ ಹೊತ್ತು
ಮನವ ಕಲಕುವೆ ಏಕೆ?
ಉಯ್ಯಾಲೆ ತೂಗಿತು ಮನಸು
ಮಗ್ಗುಲಾದವು ನೆನಪು
ತೆಕ್ಕೆ ಬಿದ್ದವು ಕನಸು
ಮಧುವು ನಿನ್ನಧರದಲ್ಲೇಕೆ?
ಸವಿವ ಹಂಬಲ ಎನಗೆ
ಮತ್ತು ತುಂಬಿದ ಕಂಗಳು
ಅದುರು ತುಟಿಗಳು
ಮುಂಗುರುಳ ಲಾಸ್ಯ
ತೆರೆ-ಮರೆಯ ಮನಸು
ಮತ್ತೇನೋ ಬಯಸಿದೆ ತನುವು
ಜರಡಿಯಾಗಿದೆ ದೇಹಕಣ್ಣ ಹನಿಗಳು ಕೊರೆದು ಹೃದಯದಲ್ಲೆಲ್ಲೋ ಕಿರು ಹಣತೆ
ಹೆಜ್ಜೆ-ಗೆಜ್ಜೆಗಳ ಬರವುಹುಸಿ ನಿರೀಕ್ಷೆ,ಅದೇ ಕಿರು ನಗುವು
Posted by
ಮೌನಿ
Thursday, December 24, 2009
at
1:13 AM

ಮನದಲ್ಲೆಲ್ಲೋ ನೆನಪುಗಳ ಉಂಗುರ
ಮೂಡಣದ ಸೂರ್ಯ ಮಸಣದೆಡೆಗೆ
ಹೂತು ಕಣ್ಣನು ನಿನ್ನ ಬರುವಿಕೆಗೆ
ಬರಿದೆ ಬರಡಾಯಿತು ಬದುಕು
ಇನಿತಿನಿತು ಆಶಿಸಿದೆ ನಿನ್ನ
ಇನಿತಾದರು ಇದೆಯೇ ನೆನಪು ನನ್ನ
ಅತಿಯಾದುದಲ್ಲ ಎನ್ನ ಬಯಕೆ
ಜೊತೆಯಾಗಲು ಒಲ್ಲೆ ನೀ ವನಿತೆ
ಜೀವ ಹಿಂಡುತಿದೆ ನೆನಪು
ವದ್ದೆಯಾಗಿದೆ ಹೃದಯ
ಮೆಟ್ಟಿಯಾದರೂ ಹೋಗು ಒಮ್ಮೆ
ಇರಲಿ ಅದರ ಗುರುತು ಎನಗೆ
Posted by
ಮೌನಿ
Friday, November 20, 2009
at
2:58 AM

ಜನಿಸಿದ ಗಳಿಗೆ ನಾನತ್ತೆ,
ಕಣ್ಣಂಚಿನಲಿ ಹನಿ ನೀರ ಇಟ್ಟು.....
ನೀನಕ್ಕೆ!!!!!
ಹಸಿದು ಜೀವ ಬಯಸೆ ಜೇನ,
ಎದೆಯಾಮೃತವ ಬಸಿದು ಕೊಟ್ಟು.....
ನೀನಕ್ಕೆ!!!!!
ಎದ್ದು ಮುಂಜಾವಿನಲಿ ಮೊದ್ದು ಮಾತಾಡಲು,
ಮನದಿ ಹಾಡ ಗುನುಗುವುದ ಬಿಟ್ಟು.....
ನೀನಕ್ಕೆ!!!!!
ಪಟ್ಟು ಬಿಡದೆ ನಡೆದು ಬಿದ್ದೆ,
ಕಣ್ಣ ತೇವದಿ, ಮಾಡಿ ಮುದ್ದ.....
ನೀನಕ್ಕೆ!!!!!
ಬಳಿಕ ಗೆದ್ದೆನೆಂಬ ನನ್ನ ಹಮ್ಮ,
ತನ್ನ ಗೆಲಿವುಯೆಂದು ಹೆಮ್ಮೆಯಿಂದ.....
ನೀನಕ್ಕೆ!!!!!
ಈಗ......
ಸೋತ ಜೀವ ಬೇಡೆ ಸನಿಹ,
ಸರಿದೆ ದೂರ ಬಿಟ್ಟು ಕರುಳ ನಾನೆತ್ತ.....?
ನೀನತ್ತೆ!!!!!
ಕೆಲವೊಮ್ಮೆ ಬೇಡದ ಮುದಿ ಜೀವಗಳನ್ನು ನೋಡಿದಾಗ ಹೀಗನಿಸಿದ್ದು....
ನಾವು ಹೀಗೇಕೆ........?
ಬಸಿದ ಜೀವಗಳಿಗೆ ನಮ್ಮ ಚೈತನ್ಯ ತುಂಬಲು ಹಿಂದೆ-ಮುಂದೆ ನೋಡುವುದೇಕೆ?
Posted by
ಮೌನಿ
Friday, October 23, 2009
at
12:45 AM

ಹುಟ್ಟೂರ ಬಿಟ್ಟೆ,
ಹುಟ್ಟು ಗುಣವ ಬಿಟ್ಟೆ,
ತಿಳಿದ ಬಯಕೆ ಬಿಟ್ಟೆ,
ತೀರದ ಆಸೆ ಬಿಟ್ಟೆ,
ಕನಸ ಕಾಣುವುದ ಬಿಟ್ಟೆ,
ಕನಸಲಿ ಬರುವುದ ಬಿಟ್ಟೆ,
ನಗುವುದ ಬಿಟ್ಟೆ,
ನಗಿಸುವುದ ಬಿಟ್ಟೆ,
ನಿನ್ನೊಲಿಸಲು ಇನ್ನೇನ ಬಿಡಲಿ?
ಇರುವುದೊಂದು ಜೀವ.....
ಬಿಡೆನು ನಿನ್ನ ನೆನಪ...............
Posted by
ಮೌನಿ
Friday, May 8, 2009
at
7:53 PM

ಅದೇನು ಕನಸು,
ಸಾಧ್ಯವಾಗದಂಥಾದ್ದು ಚೆಲುವೆ?
ಚಂದ್ರಮನ ಅಂಶ ನೀನು,
ಬಿಡು ಬಿಡು ಬೆರಗು ಸೂರ್ಯ ನಾನು.
ಚುಮು ಚುಮು ಮುಂಜಾವಿನಲ್ಲಿ,
ಕದ್ದು ಚಿಲಿಪಿಲಿಗಳ ಕೊರಳ ಸವಿಯೋಣ ಬಾ.
ಹರಿವ ನೀರಲ್ಲಿ ಮೀನ ಸರಿಸಿ,
ಮೊಗದ ನೆರಳ ತೋರುವೆ ಬಾ.
ತೊರೆಯ ನಡುವ ಮುರಿದು ಕಾಲಲ್ಲಿ,
ಮನದಣಿಯೆ ಪಿಸುಗುಟ್ಟೋಣ ಬಾ.
ಕಡಲ ತಡಿಯಲ್ಲಿ ತಂಗಾಳಿ ಜೊತೆಯಲ್ಲಿ,
ಬಿಟ್ಟೂ ಬಿಡದೆ ಗೂಡ ಕಟ್ಟೋಣ ಬಾ.
ಈ ಜೀವನ ಸುಂದರ ನಮ್ಮಿಬ್ಬರಲ್ಲಿ,
ಜೀವ ಇಡುವೆ ಜೊತೆಯಾಗೋಣ ಬಾ.
Posted by
ಮೌನಿ
Monday, May 4, 2009
at
2:07 AM

ಇಂದೇತಕೋ ತೀರದ ದಾಹ,
ಸಖಿ ನಿನ್ನ ಸ್ನೇಹ ಬೇಡಿದೆ.
ಮನ ಚಕೋರ, ಸಾಕ್ಷಿ ಚಂದ್ರಮನೇ,
ಬಿಡು, ಸೂರ್ಯ ಬಲು ಯಾತನೆ.
ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ.
ಮೂಗಿಗಡರಿದ ಮೈಗಂಧ,
ನವಯಾತನೆ ನರನಾಡಿಗಳಲಿ.
ಬೆಸೆವ ತುಟಿಗಳ ಜೊತೆಗೆ,
ಹೊಸೆದ ದಾರವಾಗುವಾಸೆ.
ಇದೋ!!! ನನ್ನ ಒಸಗೆ,
ಬಾ ಎದೆಯೇರು ಸುಮ್ಮಗೆ.
ಮತ್ತೆ ಮೈ ಮನಗಳ ಮರ್ಜನ,
ಹೂ ರಾಶಿಗಳ ಮಜ್ಜನ.
ಮಥಿಸಿ ಹೆದೆಯೇರಿಸೆ ಕಾಮನ,
ನಟ್ಟಿರಿರುಳಲಿ ಕಾಳಿಂಗ ನರ್ತನ.
Posted by
ಮೌನಿ
Friday, May 1, 2009
at
2:10 PM

ನೀರವ ರಾತ್ರಿ,ಬಯಕೆಗಳ ಕಾದಾಟ,
ಮೈಮೇಲೆ ಕೈಗಳ ಸರಿದಾಟ,
ಅಪರಿಚಿತರಂತೆ ಪರಿಚಿತ ದೇಹಗಳ ತಡಕಾಟ.
ಸಂದಿ ಗೊಂದಿಯೆನ್ನದ ಹುಡುಕಾಟ,
ಅದಮ್ಯ ಉತ್ಸುಕತೆಯ ಹೋರಾಟ,
ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲುವ ಚೆಲ್ಲಾಟ.
ಸದ್ದಿಲ್ಲದೆ ಗಮ್ಯದೆಡೆಗಿನ ಸಾಗಾಟ,
ದೇಹ ಕೆಂಡ,ಏದುಸಿರಿನ ಹಾರಾಟ,
ಸಂತ್ರಪ್ತಿಯ ಮುಗುಳ್ನಗೆ,ಕಣ್ಣಂಚಿನ ನೀರಾಟ.
Posted by
ಮೌನಿ
Saturday, April 25, 2009
at
1:57 AM

ನೀನು ಸುಂದರ,ಗುಣಿ,ಮುಗ್ಧ,
ಎಂದ,ಜನರ ನುಡಿ ಮನಕೆ ಮುದ.
ಎದೆ ಉಬ್ಬಿ,ಗರ್ವ ಮೊಗ ತುಂಬ,
ಇದೆಲ್ಲ ನನ್ನ ಗಳಿಕೆ,ಕೃಷಿ.
ಆದರೂ ಮನದಲ್ಲೆಲ್ಲೋ ಕದಲಿಕೆ,
ಅಯೋಮಯ,ಕಳವಳ,ಒಪ್ಪದ ಮನ.
ಆಚೆ ನಿಂತು ನೋಡಿದಾಗ ಕಾಣುವುದು,
ನಾನಲ್ಲಾ,ನನ್ನೊಳಗಿನ ನೀನು.
Posted by
ಮೌನಿ
Tuesday, April 21, 2009
at
1:25 AM

ಮಾತು ಮಾಣಿಕ್ಯ ,ಮೌನ ಬಂಗಾರ,
ನೋಡಿ ನಿನ್ನ ಸುಮ್ಮನಿರುವೆನೇ,
ನನ್ನ ಬಂಗಾರಾ.
ಬಳೆಯ ಕಿಣಿ ಕಿಣಿ,ಕಾಲ ಗಿಲಿ ಗಿಲಿ, ಹ್ರದಯ ಢವ ಢವ, ಬಯಕೆ ಎದೆಯಲಿ.
ಮನಸು ಮಲ್ಲಿಗೆ,ಮೊಗ ಚೆಂದಿರ, ಬಳಿಗೆ ಬರಲು, ಮನವು ಚಿತ್ತಾರ. ಮೂಗು ಸಂಪಿಗೆ,ಮೈಯ ಕಂಪಿಗೆ, ದೇಹದಿಂಪಿಗೆ, ಸೋತೆ ಮೆಲ್ಲಗೆ. ಮಾತು ಮೆಲ್ಲಗೆ,ಮೈಯ್ಯಿ ಸೋತಿರೆ, ಮಂಚ ಕಾದಿದೆ, ಬಾರೆ ತೋಳಿಗೆ ನನ್ನ ಚೆಂದಿರೆ.
Posted by
ಮೌನಿ
Wednesday, April 15, 2009
at
7:42 PM

ಮುಸ್ಸಂಜೆಯಲ್ಲಿ ನಲ್ಲನಾ ಸವಿ ನೆನಪು
ಗೋಧೂಳಿ ಹರಡಿದೆ,ಮಲ್ಲಿಗೆಯ ಕಂಪು
ಮುಂಬಾಗಿಲಲ್ಲಿ ಕಾಯುವ ಸಡಗರ
ಸದ್ದು ಸದ್ದಿಗೂ ಆಸೆ ನಿನ್ನಾಗಮನ
ಪರಿತಪಿಸಿ ಸಂದ ದಿನಗಳೆಂತೊ
ತಡೆಯಲಾರದೆ ಕಾಮನಾ ಬಾಣಗಳೆಂತೊ
ಅಂದೆಂದೋ ಉಸುರಿದಾ ಮಾತುಗಳ
ಹಿಡಿಮುಶ್ಟಿ ಕಟ್ಟಿ ಎದೆಗವಚಿಕೊಂಡಿರುವೆ
ಇಂದಿಗೂ ನೆಟ್ಟ ನೋಟ,ಕಣ್ಣ ಹನಿಗಳೊಂದಿಗೆ
ಆಸೆಗಳು ಚೂರಾಗದು,ನಿಲ್ಲಿಸೆ ಹಚ್ಹುವಾ ಹಣತೆಗಳ
ನೀ ಬಂದು ನನಸಾಗಿಸು ನನ್ನೀ ಕನಸುಗಳ
ಸೂಸಿತು ನಗು ನೆನಪಾಗಿ ನಿನ್ನ ಬಾಹು ಭಂದಗಳ