ರಸಿಕತೆ

೧. ಚಿಲಕವಿಲ್ಲದ ಬಚ್ಚಲಿನ
ಬಾಗಿಲ ಸಂದಿಯ ಹೊರಗೆ
ಕದ್ದು ನೋಡಿದ
ಕಣ್ಣುಗಳ್ಯಾರದ್ದು......?
 ೨. ಪುಷ್ಪ ಮಂದಹಾಸ,
ಜಾಜಿಯ ಘಮ,
ಬಸಿದ ಬೆವರ ಹನಿ ಹನಿಯಲ್ಲೂ
ಸೋತು ಗೆದ್ದ ನಿತ್ರಾಣ........
 ೩. ಕಳ್ಳ ಕೃಷ್ಣನ ಸುತ್ತು ಬಂದು
ಮೆಲ್ಲ ಹೆಜ್ಜೆಯ ಇಟ್ಟವಳ, ಜಡೆಯ
ಹಿಂಬದಿಯ ಬೆನ್ನ ಹುರಿಯ ಕೆಳಗೆ
ತಟ್ಟಿದ ಹೊಡೆತಕ್ಕೆ, ಮಿಂದ ನೆತ್ತಿಯೂ
ಝುಮ್ಮೆಂದಿತ್ತು....
 ೪. ಆಸೆಯ ಕೊಡ ಹೊತ್ತು,
ಹತ್ತಿರ ಬಂದವಳ, ಹಿಡಿ
ಸೊಂಟವ ಹಿಡಿದಮುಕಿ,
ಜೀಕಿದವನಿಗೆ ದಣಿವಾರಿತ್ತು,
ಮದನೆಗೆ ದಣಿವಾಗಿತ್ತು......
 ೫. ಅಡ್ಡ ಚಂದ್ರಮನ ಆಸರೆಯಲ್ಲಿ,
ನಲ್ಲ-ನಲ್ಲೆಯರ ಸಲ್ಲಾಪ,
ಚಿಗುರಿ,ಗರಿಗೆದರಿ,ಹೆದೆಯೇರಿ,
ಕಲೆತು,ಕಳಿತು,ನವಿರಾದಾಗ,
ಪುಟ್ಟ ರವಿಯ ಉದಯವಾಗಿತ್ತು....

5 comments:

  ದಿನಕರ ಮೊಗೇರ

November 14, 2010 at 8:42 PM

sundara kalpane...

tumbaa chennaagide...

  ಮೌನಿ

November 15, 2010 at 12:35 AM

ಮೊಗೇರ ಸರ್....
ತುಂಬಾ ಧನ್ಯವಾದಗಳು.ನಿಮ್ಮ ಪ್ರೀತಿಗೆ ಋಣಿ.

  shivu.k

November 16, 2010 at 7:24 PM

ಸಣ್ಣ ಸಣ್ಣ ಕವನಗಳ ರೂಪ ಚೆನ್ನಾಗಿದೆ..

ಮೊದಲನೆಯದು ಸರಳವಾಗಿದ್ದರೂ ಇಷ್ಟವಾಗುತ್ತದೆ..

  ಮೌನಿ

November 17, 2010 at 11:22 AM

ಶಿವು ಸರ್..
ನನಗನಿಸಿದಂತೆ ಪ್ರತಿಯೊಬ್ಬ ಬರಹಗಾರನಿಗೂ ವಾಚಕರ ವಿಮರ್ಷೆ.... ಸಮಾಧಾನ,ಖುಷಿ,ಚಿಂತನೆ ಹಾಗೂ ಪ್ರೇರಣೆಯನ್ನು ನೀಡುತ್ತದೆ.ನಿಮ್ಮ ಸರಳ ಹಾಗೂ ಸುಂದರ ಮಾತುಗಳಿಗೆ ಧನ್ಯವಾದಗಳು....

  Anonymous

December 13, 2010 at 10:56 AM

Guru.....
sakkattaagide...:)