ಬೆಡಗಿ


ಮಾತು ಮಾಣಿಕ್ಯ ,ಮೌನ ಬಂಗಾರ,

ನೋಡಿ ನಿನ್ನ ಸುಮ್ಮನಿರುವೆನೇ,
ನನ್ನ ಬಂಗಾರಾ.

ಬಳೆಯ ಕಿಣಿ ಕಿಣಿ,ಕಾಲ ಗಿಲಿ ಗಿಲಿ,
ಹ್ರದಯ ಢವ ಢವ,
ಬಯಕೆ ಎದೆಯಲಿ.

ಮನಸು
ಮಲ್ಲಿಗೆ,ಮೊಗ ಚೆಂದಿರ,

ಬಳಿಗೆ ಬರಲು,
ಮನವು ಚಿತ್ತಾರ.

ಮೂಗು ಸಂಪಿಗೆ,ಮೈಯ ಕಂಪಿಗೆ,
ದೇಹದಿಂಪಿಗೆ,
ಸೋತೆ ಮೆಲ್ಲಗೆ.

ಮಾತು ಮೆಲ್ಲಗೆ,ಮೈಯ್ಯಿ ಸೋತಿರೆ,
ಮಂಚ ಕಾದಿದೆ,
ಬಾರೆ ತೋಳಿಗೆ ನನ್ನ ಚೆಂದಿರೆ.

2 comments:

  Ranjita

May 20, 2009 at 7:11 AM

ನಿಮ್ಮ ಎಲ್ಲಾ ಕವನಗಳು ತುಂಬಾ ಚೆನ್ನಾಗಿವೆ .. :)

  ಮೂಕ ರೋದನೆ.....

September 28, 2009 at 12:15 PM

namaskara Ranjita awarige.
ನಾನು ತುಂಬಾ ದಿನಗಳಿಂದ ನನ್ನ ಮನೆಯ ಬಾಗಿಲುಗಳನ್ನ ತೆಗೆದಿರಲಿಲ್ಲ.
ತೆಗೆದ ಮರು ಕ್ಷಣದಲ್ಲಿ ನಿಮ್ಮ ಬರಹಗಳು....ತುಂಬಾ ಖುಶಿ...ಧನ್ಯವಾದಗಳು.