ಇಂದೇತಕೋ ತೀರದ ದಾಹ,
ಸಖಿ ನಿನ್ನ ಸ್ನೇಹ ಬೇಡಿದೆ.
ಮನ ಚಕೋರ, ಸಾಕ್ಷಿ ಚಂದ್ರಮನೇ,
ಬಿಡು, ಸೂರ್ಯ ಬಲು ಯಾತನೆ.
ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ.
ಮೂಗಿಗಡರಿದ ಮೈಗಂಧ,
ನವಯಾತನೆ ನರನಾಡಿಗಳಲಿ.
ಬೆಸೆವ ತುಟಿಗಳ ಜೊತೆಗೆ,
ಹೊಸೆದ ದಾರವಾಗುವಾಸೆ.
ಇದೋ!!! ನನ್ನ ಒಸಗೆ,
ಬಾ ಎದೆಯೇರು ಸುಮ್ಮಗೆ.
ಮತ್ತೆ ಮೈ ಮನಗಳ ಮರ್ಜನ,
ಹೂ ರಾಶಿಗಳ ಮಜ್ಜನ.
ಮಥಿಸಿ ಹೆದೆಯೇರಿಸೆ ಕಾಮನ,
ನಟ್ಟಿರಿರುಳಲಿ ಕಾಳಿಂಗ ನರ್ತನ.
ಉತ್ತಿ ಬಿತ್ತಿದ್ದು
11 months ago
3 comments:
May 4, 2009 at 9:58 AM
ತನು ಕಾದು ಮನ ಉಯ್ಯಾಲೆ,
ನಿನ ತಿರುವುಗಳೆಷ್ಟು? ಹುಡುಕುವಾಸೆ....
ತುಂಬಾ ಚೆನ್ನಾಗಿದೆ ಗುರು.....!!
May 20, 2009 at 7:06 AM
ಚೆನ್ನಾಗಿದೆ .. :)
September 28, 2009 at 12:10 PM
ಕ್ಷಮಿಸಿ...ಈಗ ಧನ್ಯವಾದ ಹೇಳುತ್ತಿರುವುದಕ್ಕೆ.
ತುಂಬಾ ತುಂಬಾ ಧನ್ಯವಾದಗಳು.
Post a Comment