ಜನಿಸಿದ ಗಳಿಗೆ ನಾನತ್ತೆ,
ಕಣ್ಣಂಚಿನಲಿ ಹನಿ ನೀರ ಇಟ್ಟು.....
ನೀನಕ್ಕೆ!!!!!
ಹಸಿದು ಜೀವ ಬಯಸೆ ಜೇನ,
ಎದೆಯಾಮೃತವ ಬಸಿದು ಕೊಟ್ಟು.....
ನೀನಕ್ಕೆ!!!!!
ಎದ್ದು ಮುಂಜಾವಿನಲಿ ಮೊದ್ದು ಮಾತಾಡಲು,
ಮನದಿ ಹಾಡ ಗುನುಗುವುದ ಬಿಟ್ಟು.....
ನೀನಕ್ಕೆ!!!!!
ಪಟ್ಟು ಬಿಡದೆ ನಡೆದು ಬಿದ್ದೆ,
ಕಣ್ಣ ತೇವದಿ, ಮಾಡಿ ಮುದ್ದ.....
ನೀನಕ್ಕೆ!!!!!
ಬಳಿಕ ಗೆದ್ದೆನೆಂಬ ನನ್ನ ಹಮ್ಮ,
ತನ್ನ ಗೆಲಿವುಯೆಂದು ಹೆಮ್ಮೆಯಿಂದ.....
ನೀನಕ್ಕೆ!!!!!
ಈಗ......
ಸೋತ ಜೀವ ಬೇಡೆ ಸನಿಹ,
ಸರಿದೆ ದೂರ ಬಿಟ್ಟು ಕರುಳ ನಾನೆತ್ತ.....?
ನೀನತ್ತೆ!!!!!
ಕೆಲವೊಮ್ಮೆ ಬೇಡದ ಮುದಿ ಜೀವಗಳನ್ನು ನೋಡಿದಾಗ ಹೀಗನಿಸಿದ್ದು....
ನಾವು ಹೀಗೇಕೆ........?
ಬಸಿದ ಜೀವಗಳಿಗೆ ನಮ್ಮ ಚೈತನ್ಯ ತುಂಬಲು ಹಿಂದೆ-ಮುಂದೆ ನೋಡುವುದೇಕೆ?
ಉತ್ತಿ ಬಿತ್ತಿದ್ದು
11 months ago
16 comments:
November 20, 2009 at 3:02 AM
ಗುರು..
ಹಿರಿಯ ಜೀವಗಳು ಬೇಡುವುದಾದರೂ ಏನನ್ನು..??
ಒಂದು ಹಿಡಿ ಪ್ರೀತಿ.. ಒಂದು ಚಿಟಿಕೆ ಸಾಂತ್ವನ..
ಅದನ್ನೇ ಕೊಡಲಾಗದವರು ಮೃಗಗಳಿಗಿಂತಲೂ ಕಡೆ....
ಕವನ ಅತೀ ಇಷ್ಟವಾಯ್ತು..
November 20, 2009 at 1:01 PM
ಗುರು ಸರ್,
ತುಂಬಾ ಚೆನ್ನಾಗಿದೆ ಕವನ... ನಮ್ಮನ್ನು ಭೂಮಿಗೆ ತಂದ ಜೀವಕ್ಕೆ ನಾವು ಕೊಡುವ ಬೆಲೆಯನ್ನು ನವಿರಾಗಿ ಹೇಳಿದ್ದೀರಾ....
November 20, 2009 at 2:31 PM
ಎಲ್ಲರಿಗು ವಯಸ್ಸಾಗುತ್ತೆ ಅನ್ನೋದನ್ನೇ ಮರೆತು ಬಿಡ್ತಾರೆ ಕೆಲವರು. ಕವನ ಚೆನ್ನಾಗಿದೆ...
November 20, 2009 at 5:17 PM
ಗುರು, ಅಮ್ಮನ ಕನಸುಗಳ ಗೂಡು ಪ್ರಾರಂಭವಗುವುದು ಅವಳ ಗರ್ಭದಲ್ಲಿ ಬಿತ್ತಿದ ಬೀಜದ ಮೊಳಕೆಯೊಡನೆ...
ಕನಸನ್ನ ಜೀವನ (ತನ್ನ) ಸವಿಯುವ ಆಸೆ ಅವಳಿಗೆ ..ತನ್ನ ಸೋಲಲ್ಲೂ ತನ್ನ ಕುಡಿಯ ಗೆಲುವನ್ನು ಹಂಬಲಿಸುವ ಜೀವ..
ಬಹಳ ಚನ್ನಾಗಿ ಕೆಲವೇ ಸಾಲುಗಳಲ್ಲಿ ತಿಳಿಸಿದ್ದೀರಿ...
November 20, 2009 at 6:48 PM
ದಿಲೀಪ್...
ಹೌದು! ನಿಜವಾದ ಮಾತು.ಅದನ್ನು ಕೊಡಲೂ ಕೆಲವೊಬ್ಬರು ಹಿಂದೇಟು ಹಾಕುವದನ್ನು ನೋಡಿದಾಗ ಬೇಸರವಾಗುವದು.
ಧನ್ಯವಾದಗಳು.
November 20, 2009 at 6:50 PM
ದಿನಕರ್ ಸಾರ್!!!
ಕವನ ಇಷ್ಟ ಪಟ್ಟು ಬೆನ್ನು ಚಪ್ಪರಿಸಿದ್ದಕ್ಕೆ ಋಣಿ,ಖುಶಿ.
ಧನ್ಯವಾದಗಳು.
November 20, 2009 at 6:53 PM
ಗೌತಮ್....
ಅದನ್ನೇ ಹೇಳೋದು...ಕಣ್ಣಮುಂದೇ ವಯಸ್ಸಾಗುವವರನ್ನು ನೋಡಿದರೂ,ಮುಂದೆ ತಮಗೂ ಕಟ್ಟಿಟ್ಟ ಬುತ್ತಿ ಎಂಬುದಾದರೂ...ನೀವು ಹೇಳಿದಂತೆ ಮರೆತು ಬಿಡ್ತಾರಲ್ರೀ.
ನನ್ನ ಬ್ಲಾಗ್ ಗೆ ಬಂದು ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.
November 20, 2009 at 6:58 PM
ಆಝಾದ್ ಸರ್...
ಕುಡಿಯೊಡೆದ ಕ್ಷಣದಿಂದಲೇ ಅವಳ ಅವಲಂಬಿತವಾಗುವ ಮಗು ಬೆಳೆದು ತನ್ನ ಕಾಲ ಮೇಲೆ ತಾನು ನಿಂತ ಮೇಲೆ ಕರುಳನ್ನು ಮರೆಯುವದು ಎಂಥ ವಿಪರ್ಯಾಸ....
ತುಂಬಾ ಧನ್ಯವಾದಗಳು.ನಿಮ್ಮ ಆಶೀರ್ವಾದ ಆಶಿಸುತ್ತಿರುತ್ತೇನೆ.
November 21, 2009 at 6:36 PM
guru,, tumbaa tumbaa chennagide..:):)
November 21, 2009 at 10:12 PM
ಚೇತನಕ್ಕಾ.
ಹೌದಲ್ಲವೇ? ನಮ್ಮ ಹಿರಿಯರ ಇಳಿ ವಯಸ್ಸಿನಲ್ಲಿ ಅವರನ್ನು ಜತನ ಮಾಡುವದು ನಮ್ಮ ಕರ್ತವ್ಯವಲ್ಲವೇ?
ನನ್ನ ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
November 22, 2009 at 10:16 PM
Guru tumba chennagide....
November 23, 2009 at 3:15 PM
ತುಂಬಾ ಸೊಗಸಾಗಿದೆ
ಅರ್ಥಗರ್ಬಿತ ಸಾಲುಗಳು ಮನಸ್ಸನ್ನು ಕ್ಷಣ ಕಾಲ ಚಿಂತನೆಗೆ ಒಳಪಡಿಸುತ್ತವೆ
November 23, 2009 at 7:17 PM
ಸುಬ್ರಹ್ಮಣ್ಯ....
ನನ್ನ ಬ್ಲಾಗ್ ಗೆ ಬಂದು ಕವನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.
November 23, 2009 at 7:22 PM
ಗುರುಮೂರ್ತಿ ಸಾರ್ ...
ನನ್ನ ಬ್ಲಾಗ್ ಗೆ ನಿಮ್ಮ ಭೇಟಿ ತುಂಬಾ ಖುಶಿ ತಂದಿತು,ಅದರಲ್ಲೂ....ನಿಮ್ಮಂತಹ ಅನುಭವಿಗಳ ಮೆಚ್ಚುಗೆ ನನ್ನಲ್ಲಿ ಒಂದು ರೀತಿಯ ಸಮಾಧಾನ,ಉತ್ಸಾಹ ತರುವುದರಲ್ಲಿ ಎರಡು ಮಾತಿಲ್ಲ.ನಿಮ್ಮ ಆಶೀರ್ವಾದ ಸದಾ ಇರಲಿ.
December 2, 2009 at 9:55 PM
ನಿಮ್ಮ ಕವನ ತುಂಬ ಚೆನ್ನಾಗಿದೆ ಸರ್.. ನಮ್ಮ ತಂದೆ ತಾಯಿ ನಮಗೆ ಏನೆಲ್ಲಾ ಮಾಡಿರುತಾರೆ..ಅವರ ಮುಪ್ಪಿನಲ್ಲಿ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಜಕ್ಕೂ ನಮ್ಮ ಕರ್ತವ್ಯವಾಗಿದೆ :)
December 3, 2009 at 9:55 AM
ಸ್ನೊ ವ್ಹೈಟ್.....
ನನ್ನ ಬ್ಲಾಗ್ ಗೆ ನಿಮ್ಮ ಮೊದಲ ಭೇಟಿ ತುಂಬಾ ಖುಶಿ ತಂದಿತು.ಧನ್ಯವಾದಗಳು.
ನೀವು ಹೇಳಿದ್ದು ಸತ್ಯ.ನಮ್ಮ ಹಿರಿಯರನ್ನು ಅವರ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳದಿದ್ದರೆ ನಾವು ಸ್ವಾರ್ಥಿಗಳು ಅಲ್ಲವೇ?
ಧನ್ಯವಾದಗಳು.
Post a Comment