ಮನದಲ್ಲೆಲ್ಲೋ ನೆನಪುಗಳ ಉಂಗುರ
ಮೂಡಣದ ಸೂರ್ಯ ಮಸಣದೆಡೆಗೆ
ಹೂತು ಕಣ್ಣನು ನಿನ್ನ ಬರುವಿಕೆಗೆ
ಬರಿದೆ ಬರಡಾಯಿತು ಬದುಕು
ಇನಿತಿನಿತು ಆಶಿಸಿದೆ ನಿನ್ನ
ಇನಿತಾದರು ಇದೆಯೇ ನೆನಪು ನನ್ನ
ಅತಿಯಾದುದಲ್ಲ ಎನ್ನ ಬಯಕೆ
ಜೊತೆಯಾಗಲು ಒಲ್ಲೆ ನೀ ವನಿತೆ
ಜೀವ ಹಿಂಡುತಿದೆ ನೆನಪು
ವದ್ದೆಯಾಗಿದೆ ಹೃದಯ
ಮೆಟ್ಟಿಯಾದರೂ ಹೋಗು ಒಮ್ಮೆ
ಇರಲಿ ಅದರ ಗುರುತು ಎನಗೆ
ಉತ್ತಿ ಬಿತ್ತಿದ್ದು
11 months ago
8 comments:
December 30, 2009 at 3:10 PM
ನಿಜಕ್ಕೂ ಚೆನ್ನಾಗಿದೆ ಸರ್ ನಿಮ್ಮ ಕವನ..ಕೊನೆ ಎರಡು ಸಾಲುಗಳಂತೂ ತುಂಬಾ ಇಷ್ಟ ಆಯಿತು :)
December 30, 2009 at 6:04 PM
ತುಂಬಾ ಧನ್ಯವಾದಗಳು ಸರ್.....
ನನ್ನ ಬ್ಲಾಗ್ ಗೆ ಬಂದು ಕವನ ಮೆಚ್ಚಿದ್ದಕ್ಕೆ ಹಾಗೂ ನಿಮ್ಮ ಪ್ರೋತ್ಸಾಹಕ್ಕೆ.
January 4, 2010 at 8:03 PM
ಇನಿತಿನಿತು ಆಶಿಸಿದೆ ನಿನ್ನ
ಇನಿತಾದರು ಇದೆಯೇ ನೆನಪು ನನ್ನ
ಎಂಥಹ ಮಧುರ ಸಾಲುಗಳು
January 5, 2010 at 12:00 AM
ಗುರುಮೂರ್ತಿ ಸರ್....
ನಿಮ್ಮ ಆಶೀರ್ವಾದ.....ಇನಿತಾದರೂ ಇಷ್ಟವಾಯಿತಾದರೆ ಧನ್ಯ.ನಿಮ್ಮ ಪ್ರೋತ್ಸಾಹಕ್ಕೆ ಋಣಿ.
February 19, 2010 at 9:28 AM
ಅಬ್ಬಾ.. ತುಂಬಾ ಭಾವುಕವಾಗಿ ಭಾರವಾಗಿದೆ ಕವಿತೆ..
February 25, 2010 at 1:21 AM
ನೀಲಿ ಹೂವು.......
ನೀವು ನನ್ನ ಬ್ಲಾಗ್ ಗೆ ಬಂದು ನನ್ನ ಕವಿತೆಯನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು
March 6, 2010 at 1:11 PM
very nice poem!
March 7, 2010 at 1:28 AM
ಮನಮುಕ್ತಾ ಅವರೆ....
ನನಗನಿಸಿದ ಮಟ್ಟಿಗೆ ಬ್ಲಾಗಿಗೆ ಭೇಟಿ ಕೊಡುವವರು ವಿರಳ(ಪರಿಚಯವಿದ್ದದ್ದನ್ನು ಬಿಟ್ಟು).ಬಂದರೂ ಓದಿ ಸುಮ್ಮನಾಗುವವರು ಬಹಳ.....ಬಂದು,ಓದಿ,ಮೆಚ್ಚುಗೆ ವ್ಯಕ್ತಪಡಿಸುವವರು ಅಪರೂಪ....
ನೀವು ಬಂದು ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.
ಹಾರೈಕೆ ಇರಲಿ.
Post a Comment